ಪ್ರತಿ ಸ್ಪರ್ಧಿ ನಾಮ ಪತ್ರ ಹಿಂತೆಗೆತ:ಅಶೋಕಸ್ವಾಮಿ ಹೇರೂರ ಆಯ್ಕೆ , ಘೋಷಣೆ ಮಾತ್ರ ಬಾಕಿ.
ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ,ಬೆಂಗಳೂರು ಈ ಸಂಸ್ಥೆಯ ವ್ಯವಸ್ಥಾಪಕ ಮಂಡಳಿ ಸದಸ್ಯತ್ವ ಸ್ಥಾನಕ್ಕೆ ಸ್ಪರ್ದಿಸಿದ್ದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಅವರ ಪ್ರತಿ ಸ್ಪರ್ಧಿ ತಮ್ಮ ನಾಮ ಪತ್ರವನ್ನು ಹಿಂತೆಗೆದುಕೊಂಡಿರುವುದರಿಂದ ಹೇರೂರ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದು ,ಘೋಷಣೆಯಂದೇ ಬಾಕಿ ಉಳಿದಿದೆ.
ಅಶೋಕಸ್ವಾಮಿಯವರ ನಾಮ ಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ್ದ,ರಾಯಚೂರು ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಶಿ ತಮ್ಮ ನಾಮ ಪತ್ರವನ್ನು ಹಿಂತೆಗೆದು ಕೊಳ್ಳುವ ಮೂಲಕ ಹೇರೂರ ಅವರನ್ನು ಬೆಂಬಲಿಸಿದ್ದಾರೆ.
ಯಾದಗಿರಿ ಜಿಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನ್ನ ಮಲ್ಲಿಕಾರ್ಜುನ ಅಕ್ಕಿ ಸಹ ಅಶೋಕಸ್ವಾಮಿಯವರನ್ನು ಬೆಂಬಲಿಸಿ, ನಾಮ ಪತ್ರ ಸಲ್ಲಿಸಿರಲಿಲ್ಲ.ಹೀಗಾಗಿ ಅಶೋಕಸ್ವಾಮಿ ಹೇರೂರ ಅವಿರೋಧವಾಗಿ ಆಯ್ಕೆಯಾಗಲು ಕಾರಣವಾಗಿದೆ.
ಈ ಸಂದರ್ಭದಲ್ಲಿ ತಾವು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಜೊಷಿ ಮತ್ತು ಅಕ್ಕಿಯವರಿಗೆ ಹಾಗೂ ಸಹಕಾರ ನೀಡಿದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಉದಯ ಕುಮಾರ ದರೋಜಿಯವರಿಗೆ ಧನ್ಯವಾದಗಳನ್ನು ಹೇರೂರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ದಿನಾಂಕ 27-09-2023 ರಂದು ಬುಧವಾರ ಅಶೋಕಸ್ವಾಮಿ ಹೇರೂರ ಅವರ ಆಯ್ಕೆಯನ್ನು ಬೆಂಗಳೂರಿನಲ್ಲಿರುವ ಸಂಸ್ಥೆಯ 106 ನೇ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಘೋಷಿಸಲಾಗುತ್ತಿದೆ.