ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರಕಾರದ ಬಡ್ಜೆಟ್ ನಲ್ಲಿ ಅನುದಾನ ನೀಡಲಾಗಿಲ್ಲ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಸಮದಾನ ವ್ಯಕ್ತ ಪಡಿಸಿದ್ದಾರೆ.
೧)ಗಂಗಾವತಿ-ಬಳ್ಳಾರಿ ಮತ್ತು ಬೀದರ್ ಶ್ರೀರಂಗಪಟ್ಟಣ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿಲ್ಲ.
೨)ಗಂಗಾವತಿ-ದರೋಜಿ ರೇಲ್ವೆ ಲೈನ್ ಮ್ಯಾಚಿಂಗ್ ಗ್ರ್ಯಾಂಟ್ ನೀಡಿಲ್ಲ.
೩) ಆನೆಗುಂದಿ-ಹಂಪಿ ತುಂಗಭದ್ರಾ ನದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಅನುದಾನ ನೀಡಿಲ್ಲ.
೪) ಜಿಲ್ಲೆಯಲ್ಲಿ ಕರಡಿ ಧಾಮ ಕ್ಕೆ ಹಣ ಮಂಂಜೂರು ಆಗಿಲ್ಲ.
೫) ಸಿಂಧನೂರು-ಗಿಣಿಗೇರಾ ಚತುಸ್ಪಥ ರಸ್ತೆ ನಿರ್ಮಾಣದ ಪ್ರಸ್ಥಾಪ ಇಲ್ಲ.
೬) ಸ್ನಾತಕೋತ್ತರ ಪದವಿ ಕೇಂದ್ರ ಆರಂಭಿಸಲು ಅನುದಾನ ಇಲ್ಲ.
೭) ಗಂಗಾವತಿ-ಆನೆಗುಂದಿ-ಹಂಪಿ ಹೆರಿಟೇಜ್ ರಸ್ತೆ ನಿರ್ಮಾಣ ಬೇಡಿಕೆಗೆ ಅನುದಾನ ಇಲ್ಲ.
ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ. ಬರೀ ಗ್ಯಾರಂಟಿ ಯೋಜನೆಗಳಿಗೆ ಬಡ್ಜೆಟ್ ಮೀಸಲಾಗಿದ್ದು ,ವಾಣಿಜ್ಯ ಮತ್ತು ಆದಾಯ ತೆರಿಗೆ ಪಾವತಿಸುವವರಿಗೆ ಯಾವುದೇ ಸೌಲಭ್ಯಗಳು ದೊರಕಿಲ್ಲ ಎಂದವರು ಹೇಳಿದ್ದಾರೆ.