ಸಹಕಾರಿ ರತ್ನ ಚಂದ್ರಶೇಖರಯ್ಯ ಭಾನಾಪೂರ ಅವರಿಗೆ ಸನ್ಮಾನ
ಕೊಪ್ಪಳ: ಯಲಬುರ್ಗಾ ತಾಲೂಕು ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಭಾನಾಪೂರ ಇವರು “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಹಾಗೂ ಶ್ರೀ ವೀರ ಮಹೇಶ್ವರ ಸಹಕಾರಿ ನಿಯಮಿತ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ಪಾರ್ವತಿ ಸೇರಿದಂತೆ ಮತ್ತಿತರರು ಚಂದ್ರಶೇಖರಯ್ಯ ಭಾನಾಪೂರ ದಂಪತಿಗಳನ್ನು ಕೊಪ್ಪಳದ ಅವರ ನಿವಾಸದಲ್ಲಿ ಬುಧುವಾರ ಸನ್ಮಾನಿಸಿದರು.