ಗಂಗಾವತಿ:ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಹರಿಕೃಷ್ಣನ್ ಮತ್ತು ಇದೇ ಶನಿವಾರ ಆಕಸ್ಮಿಕವಾಗಿ ಮೃತರಾದ ನಗರದ ಜಡೆಸಿದ್ದೇಶ್ವರ ಫ಼ಾರ್ಮಾದ ಸಹ ಮಾಲೀಕರಾದ ಶರಣ ಬಸವ ಪಾಟೀಲ್ ಅವರ ಆತ್ಮಕ್ಕೆ ಶಾಂತಿ ಕೋರಲು ಶನಿವಾರ ಔಷಧೀಯ ಭವನದಲ್ಲಿ ಶ್ರದ್ದಾಂಜಲಿ ಸಭೆ ಕರೆಯಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ, ಮಧ್ಯ ವಯಸ್ಕರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗೊಳ್ಳುವ ಮೂಲಕ ಆರೋಗ್ಯದ ಕಡೆ ತೀವ್ರ ಗಮನ ಹರಿಸಬೇಕೆಂದು
ಕರೆ ನೀಡಿದರು.
ಮಧ್ಯ ವಯಸ್ಕರು ಏಕಾ ಏಕಿ ಹೃದಯ ಘಾತಕ್ಕೆ ಈಡಾಗುತ್ತಿದ್ದು , ಒಳ್ಳೆಯ ಅಡಿಗೆ ಎಣ್ಣೆ ಮತ್ತು ಆರೋಗ್ಯಕರ ಆಹಾರ ಸೇವನೆಯ ಮೂಲಕ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕು ಹಾಗೂ ತಂಬಾಕು ಸೇವನೆಯನ್ನು ತ್ಯಜಿಸಬೇಕೆಂದು ಸಭೆಯಲ್ಲಿ ಕರೆ ನೀಡಿದರು.ಔಷಧ ವ್ಯಾಪಾರಿಗಳು ಸಿಗರೇಟ್ ಸೇದುವುದು,ತಂಬಾಕು ಜಗಿಯುವುದು ಮಾಡುವುದರಿಂದ ಸಾಮಾನ್ಯ ಜನರು ಅದನ್ನೇ ಅನುಕರಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಔಷಧ ವ್ಯಾಪಾರಿಗಳು ತಂಬಾಕು ಸೇವನೆ ಕೈ ಬಿಡಲು ಇಂದೇ ತೀರ್ಮಾನ ಮಾಡಿ ಎಂದು ತಾಕೀತು ಮಾಡಿದರು.
ಹಿರಿಯ ಔಷಧ ವ್ಯಾಪಾರ ಅಪ್ಪಣ್ಣ ಅರಳಿ ಮತ್ತು ಫ಼ಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಹಿರೇಮಠ ಇವರುಗಳು ದಿವಂಗತ ವಿ.ಹರಿಕೃಷ್ಣನ್ ಅವರ ಒಡನಾಟದ ಬಗ್ಗೆ ಮಾತನಾಡಿದರು.
ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕ ಅಜಯ ಕುಮಾರ್ ತಮ್ಮ ಕಂಪನಿಯ ರೈಸ್ ಬ್ರಾನ್ ಆಯಿಲ್ ಬಗ್ಗೆ ವಿವರಣೆ ನೀಡುವುದರ ಜೊತೆಗೆ ವಿವಿಧ ಆಯುರ್ವೇದ ಉತ್ಪನ್ನಗಳ ಉಪಯೋಗದ ಬಗ್ಗೆ ಮಾತನಾಡಿದರು.ಇದೇ ಕಂಪನಿಯ ಮುಖ್ಯಸ್ಥರಾದ ವಿಜಯ ಕುಮಾರ್, ಮಹಂತೇಶ್ ಹಿರೇಮಠ,ರಮೇಶ ಬಾಬು ಮತ್ತು ಶ್ರೀಮತಿ ಮಂಜುಳಾ ಕಂಪ್ಲಿ ಉಪಸ್ಥಿತರಿದ್ದರು.
ಗಂಗಾವತಿ-ಕನಕಗಿರಿ-ಕಾರಟಗಿ ಸಂಯುಕ್ತ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ವೀರಣ್ಣ ಕಾರಂಜಿ, ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಮಾಲಿ ಪಾಟೀಲ್, ನಿರ್ದೇಶಕರುಗಳಾದ ಎಸ್.ಮಂಜುನಾಥ,ಪಾಂಡುರಂಗ ಜನಾದ್ರಿ,ಅಮರೇಶ ಅರಳಿ,ಅಶೋಕ ಕುಮಾರ ನವಲಿ ಹಿರೇಮಠ,ವೀರಭದ್ರಗೌಡ, ಕುಷ್ಟಗಿ ತಾಲೂಕು ಗ್ರಾಮೀಣ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ನಾಗರಾಜ ರಡ್ಡೇರ್,ಹನುಮಂತರಾಯ ದೇಸಾಯಿ,ಶ್ರೀಧರ ಹುಲಿಮನಿ,ಚಂದ್ರು ಹಿರೇಮಠ, ಕೊಪ್ಪಳ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಮುಖ್ಯಸ್ಥರಾದ ಶರಣಪ್ಪ ಬೆಟಗೇರಿ, ವಿರೇಶ ಸಾರಂಗ ಮಠ,ಇತರರು ಸೇರಿ ನೂರಕ್ಕೂ ಹೆಚ್ಚು ಜನ ಸೇರಿ ಮೃತರ ಆತ್ಮಕ್ಕೆ ಶಾಂತಿಕೋರಿದರು.
ಶ್ರೀಮತಿ ಸಂಧ್ಯಾ ಪಾರ್ವತಿ, ರಘುನಾಥ ದರೋಜಿ, ಕಲ್ಯಾಣ ರಾವ್,ಚಂದ್ರಶೇಖರ ಹೇರೂರ, ರಾಜಶೇಖರ ಭಾನಾಪೂರ ಕಾರ್ಯಕ್ರಮ ನಿರ್ವಹಿಸಿದರು.