ಡಾ.ರಾಯಲು ಅವರ ‘ಸಾಯಿ ಪಾದುಕಾ’ ನೂತನ ಆಸ್ಪತ್ರೆ ಆರಂಭ.
ಗಂಗಾವತಿ: ಮಾಜಿ ಸಚಿವ ಶ್ರೀರಂಗದೇವರಾಯಲು ಮತ್ತು ಶ್ರೀಮತಿ ಲಲಿತಾ ರಾಣಿಯವರ ಎರಡನೇ ಪುತ್ರ ಡಾ.ವೀರ ಸಿಂಹ ನರಸಿಂಹ ದೇವರಾಯಲು ಅವರು ಆನೆಗುಂದಿ ರಸ್ತೆಯಲ್ಲಿ ಗುರುವಾರ ಹೊಸದಾಗಿ ತಮ್ಮ ಆಸ್ಪತ್ರೆ ಆರಂಭಿಸಿದರು.
ಶಸ್ತ್ರ ಚಿಕಿತ್ಸಕರಾದ ಡಾ.ರಾಯಲು,ಲ್ಯಾಪ್ರೋಸ್ಕೋಪಿಕ್ ತಜ್ಞರಾಗಿದ್ದು ,ಹತ್ತು ವರ್ಷಗಳ ಕಾಲ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.ಈ ಮೊದಲು ಹೊಸಪೇಟೆ ನಗರದಲ್ಲಿ ತಮ್ಮ ಆಸ್ಪತ್ರೆ ಆರಂಭಿಸಿದ್ದ ಇವರು ಇದೀಗ ಗಂಗಾವತಿ ನಗರದಲ್ಲಿ ನೂತನವಾಗಿ ಆಸ್ಪತ್ರೆ ಆರಂಭಿಸಿದ್ದಾರೆ.
ಇದುವರೆಗೂ ಗಂಗಾವತಿ ಭಾಗದ ಜನತೆ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸೆಗಾಗಿ ಬೇರೆ ಬೇರೆ ಊರಿನ ವೈಧ್ಯರನ್ನು ಅವಲಂಭಿಸಬೇಕಾಗಿತ್ತು.ಇದೀಗ ಗಂಗಾವತಿ ನಗರದಲ್ಲಿಯೇ ಲ್ಯಾಪ್ರೋಸ್ಕೋಪಿಕ ತಜ್ಞರು ಲಭ್ಯವಾಗಲಿದ್ದಾರೆ.
ನೂತನ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ, ನ್ಯಾಯವಾದಿ ಸಂಧ್ಯಾ ಪಾರ್ವತಿ ಮತ್ತು ಸ್ಥಳೀಯ ಔಷಧ ವಿತರಕ ನಾಗರಾಜಸ್ವಾಮಿ ಡಾ.ರಾಯಲು ಅವರಿಗೆ ಶುಭ ಕೋರಿದರು.ಶ್ರೀಮತಿ ಲಲಿತಾ ರಾಣಿ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.