ಅಶೋಕಸ್ವಾಮಿ ಹೇರೂರ ಭೇಟಿಯಾದ ಬಾಜಪ ಅಭ್ಯರ್ಥಿ ಡಾ.ಬಸವರಾಜ.
ಗಂಗಾವತಿ:ಭಾರತೀಯ ಜನತಾ ಪಕ್ಷದ ಕೊಪ್ಪಳ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ.ಕೆ ಅವರು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಮತ್ತು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾಗಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಬಳಸಿ, ಬಿ.ಜೆ.ಪಿ ಅಭ್ಯರ್ಥಿಗೆ ಮತಗಳನ್ನು ದೊರಕಿಸಿಕೊಡಲು ಸಹಾಯ ಮಾಡಬೇಕೆಂದು ಬಿ.ಜೆ.ಪಿ.ಧುರಿಣ ಎಚ್.ಗಿರೆಗೌಡ ಅವರು ಅಶೋಕಸ್ವಾಮಿ ಅವರಲ್ಲಿ ಮನವಿ ಮಾಡಿದ್ದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು ಮಾತನಾಡಿ ಬಿ.ಜೆ.ಪಿ.ಬೆಂಬಲಿಸಲು ವಿನಂತಿಸಿದರು.ಈ ಸಂಧರ್ಭದಲ್ಲಿ ರಾಜಶೇಖರಯ್ಯ ಭಾನಾಪೂರ, ನಾಗರಾಜಸ್ವಾಮಿ,ದರೋಜಿ ರಘುನಾಥ, ಸುರೇಂದ್ರ,ಸಿ.ಚಿದಾನಂದ ಮತ್ತು ರಮೇಶ್ ಮಡಿವಾಳರ ಸೇರಿದಂತೆ ಬಿ.ಜೆ.ಪಿಯ ಇತರ ಧುರಿಣರು ಹಾಜರಿದ್ದರು.