ಸಮ್ಮೇಳನದ ಸರ್ವಾಧ್ಯಕ್ಷ ಡಾ.ಅಭಿಷೇಕ ಸ್ವಾಮಿಗೆ ಅಧಿಕೃತ ಆಹ್ವಾನ.
ಗಂಗಾವತಿ:ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಅಭಿಷೇಕಸ್ವಾಮಿ ಹೇರೂರ ಅವರಿಗೆ ಆದಿತ್ಯವಾರ ಅಧಿಕೃತ ಆಹ್ವಾನ ನೀಡಲಾಯಿತು.
ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ನವೆಂಬರ್-30 ರಂದು ಗುರುವಾರ ಹಮ್ಮಿಕೊಳ್ಳಲಾಗಿರುವ ಈ ಸಮ್ಮೇಳನ,ಕೊಪ್ಪಳ-ರಾಯಚೂರ ರಸ್ತೆಯ ಎ.ಪಿ.ಎಮ್.ಸಿ.ಆವರಣದ ಶ್ರೀ ಚನ್ನಬಸವ ಸ್ವಾಮಿ ಮಂದಿರದಿಂದ ಸರ್ವಾಧ್ಯಕ್ಷರ ಮೆರವಣಿಗೆಯ ಮೂಲಕ ಆರಂಭವಾಗುತ್ತದೆ.
ಸ್ಥಬ್ದ ಚಿತ್ರಗಳು,ಮಕ್ಕಳ ನೃತ್ಯ, ವಾದ್ಯಗಳೊಂದಿಗೆ ಪ್ರಾರಂಭವಾಗುವ ಮೆರವಣಿಗೆ ಲಿಟಲ್ ಹಾರ್ಟ್ಸ್ ಶಾಲೆಯನ್ನು ತಲುಪಲಿದೆ.ಮಕ್ಕಳಿಂದ ವಿವಿಧ ಗೋಷ್ಠಿ ,
ಕವಿ ಗೋಷ್ಠಿ , ಸಂವಾದ ಮುಂತಾದ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿವೆ.
ನ್ಯಾಯವಾದಿಗಳಾದ ಅಶೋಕಸ್ವಾಮಿ ಹೇರೂರ ಮತ್ತು ಸಂಧ್ಯಾ ಪಾರ್ವತಿ ಅವರ ಪುತ್ರರಾಗಿರುವ ಡಾ.ಅಭಿಷೇಕ ಸ್ವಾಮಿ ಹೇರೂರ,ಲಿಟಲ್ ಹಾರ್ಟ್ಸ್ ಶಾಲೆಯ ಹಳೆಯ ವಿಧ್ಯಾರ್ಥಿಯಾಗಿದ್ದು ,ಮೈಸೂರು ಸರಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಬಿ.ಬಿ.ಎಸ್. ಪದವಿ ಪಡೆದಿದ್ದು ,ಪ್ರಸ್ತುತ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎಮ್.ಡಿ.ಅಭ್ಯಾಸ ಮಾಡುತ್ತಿದ್ದಾರೆ.
ಶಾಲಾ ಮುಖ್ಯೊಪಾಧ್ಯಯರಾದ ಶ್ರೀಮತಿ ಪ್ರಿಯಾ ಕುಮಾರಿ,ಸಂಸ್ಥೆಯ ಕಾರ್ಯದರ್ಶಿಗಳಾದ ಜಗನ್ನಾಥ ಆಲಮಪಲ್ಲಿ ,ಗಣಿತ ಶಿಕ್ಷಕಿ ರಾಧಿಕಾ ಪೊಲಿನಾ,ಕನ್ನಡ ಶಿಕ್ಷಕ ನೀಲಕಂಠ ಅರೆಹುಣಸಿ,ದೈಹಿಕ ಶಿಕ್ಷಕ ಪ್ರದೀಪ್, ರಾಮರಾವ್ ಆಲಂಪಲ್ಲಿ,ಅಶೋಕಸ್ವಾಮಿ ಹೇರೂರ ಶ್ರೀಮತಿ ಸಂದ್ಯಾ ಪಾರ್ವತಿ ಅಧಿಕೃತ ಆಹ್ವಾನ ಸಂಧರ್ಭದಲ್ಲಿ ಉಪಸ್ಥಿತರಿದ್ದರು.