ಸಹಾಯಕ ಆಯುಕ್ತರ ನ್ಯಾಯಾಲಯ: ಅಶೋಕಸ್ವಾಮಿ ಹೇರೂರ ಸ್ವಾಗತ.
ಗಂಗಾವತಿ: ನಗರದಲ್ಲಿ ಸಹಾಯಕ ಆಯುಕ್ತರ ನ್ಯಾಯಾಲಯ ಆರಂಭಿಸುತ್ತಿರುವುದನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸ್ವಾಗತಿಸಿದ್ದಾರೆ.
ನೂತನವಾಗಿ ಕೊಪ್ಪಳ ಜಿಲ್ಲೆ ಆರಂಭವಾದಗಿನಿಂದಲೇ ಗಂಗಾವತಿ ನಗರದಲ್ಲಿ ಸಹಾಯಕ ಆಯುಕ್ತರ ಕಚೇರಿ ಆರಂಭಿಸುವಂತೆ ಸಂಸ್ಥೆಯಿಂದ ನಿರಂತರವಾಗಿ ಪತ್ರ ವ್ಯವಹಾರ ನಡೆಸಲಾಗಿತ್ತು ಎಂದು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರರೂ ಆಗಿರುವ ಹೇರೂರ ತಿಳಿಸಿದ್ದಾರೆ.
ಕಾಂಗ್ರೆಸ್ ಧುರಿಣೆ ಶೈಲಜಾ ಹಿರೇಮಠ, ಡಾ.ಶಿವಕುಮಾರ ಪಾಟೀಲ್,ಗುಡ್ಲಾನೂರ ಮಂಜುನಾಥ ನೇತ್ರತ್ವದಲ್ಲಿ ಅಶೋಕಸ್ವಾಮಿ ಹೇರೂರ ಮತ್ತಿತರರು ಸಚಿವ ಶಿವರಾಜ ತಂಗಡಿಯವರಿಗೆ ಕಿಷ್ಕಿಂದಾ ಜಿಲ್ಲಾ ರಚನೆ, ಸಹಾಯಕ ಆಯುಕ್ತರ ಕಚೇರಿ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಸ್ತಿತ್ವಕ್ಕೆ ತರಲು ಒತ್ತಾಯಿಸಲಾಗಿತ್ತು.
ಇದರಂತೆ ಗಂಗಾವತಿ ಶಾಸಕರಾದ ಜನಾರ್ಧನ ರೆಡ್ಡಿಯವರಿಗೂ ಮನವಿ ಸಲ್ಲಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ,ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿ ಹಾಗೂ ಗಂಗಾವತಿ ವಕೀಲರ ಸಂಘ ಇವುಗಳ ಒತ್ತಾಸೆಯ ಮೇರೆಗೆ ಗಂಗಾವತಿ ನಗರದಲ್ಲಿ ಸಹಾಯಕ ಆಯುಕ್ತರ ನ್ಯಾಯಾಲಯ ಆರಂಭವಾಗಲು ಕಾರಣವಾಯಿತು ಎಂದು ಅಶೋಕಸ್ವಾಮಿ ಸಂತೋಷ ವ್ಯಕ್ತಪಡಿಸಿದ್ದಾರೆ.