ಗಂಗಾವತಿ-ದರೋಜಿ-ಬಾಗಲಕೋಟ ರೇಲ್ವೆ ಲೈನ್ ನಿರ್ಮಾಣಕ್ಕೆ ಮನವಿ ಸಲ್ಲಿಕೆ.

ಗಂಗಾವತಿ:ದರೋಜಿ-ಗಂಗಾವತಿ ಮತ್ತು ಗಂಗಾವತಿ ಬಾಗಲಕೋಟ ಬ್ರಾಡಗೇಜ್ ರೇಲ್ವೆ ಲೈನ್ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ರೇಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಕೊಪ್ಪಳದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕೊಪ್ಪಳದ ಕುಷ್ಟಗಿ ರಸ್ತೆಯ ರೇಲ್ವೆ ಮೇಲ್ಸೇತುವೆಯನ್ನು ಮಂಗಳವಾರ ಉದ್ಘಾಟಿಸಲು ಆಗಮಿಸಿದ್ದ ಸಚಿವ ವಿ.ಸೋಮಣ್ಣ ,ಮನವಿಗೆ ಸ್ಪಂದಿಸಿ ದರೋಜಿ-ಗಂಗಾವತಿ ಮತ್ತು ಗಂಗಾವತಿ-ಬಾಗಲಕೋಟ್ ಈ ಎರಡು ಬ್ರಾಡಗೇಜ್ ಲೈನ್ ನಿರ್ಮಾಣಕ್ಕಾಗಿ ಡಿ.ಪಿ.ಆರ್. ತಯಾರಿಸುವಲ್ಲಿ ಇಲಾಖೆ ನಿರತವಾಗಿದ್ದು ,ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಮಾಜಿ ಸಂಸದ ಶಿವರಾಮಗೌಡ,ಕುಷ್ಟಗಿ ಶಾಸಕ ದೊಡ್ಡನಗೌಡ,ಮಾಜಿ ಶಾಸಕ ಶರಣಪ್ಪ ಕ್ಯಾವಟರ್ ಕ್ಯಾವಟರ್,ಗಂಗಾವತಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಮುದೇನೂರ ಹಿರೇಮಠ, ವಾಣಿಜ್ಯೊಧ್ಯಮಿ ಉಗಮರಾಜ,ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ,ಶಾಸಕ ರಾಘವೇಂದ್ರ ಹಿಟ್ಣಾಳ,ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಮತ್ತು ರೇಲ್ವೆ ಇಲಾಖೆಯ ಬಹುತೇಕ ಅಧಿಕಾರಿಗಳು ಸೇರಿದಂತೆ ಹಲವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ,ಧಡೆಸಗೂರು ಬಸವರಾಜ,ಮಾಜಿ ಸಚಿವ ಹಾಲಪ್ಪ ಆಚಾರ್,ಕಂಪ್ಲಿ ರೇಲ್ವೆ ಹೋರಾಟ ಸಮಿತಿಯ ಹೇಮಯ್ಯ ಸ್ವಾಮಿ, ಕಾರ್ಯದರ್ಶಿ ಕಾಳಿಂಗ ವರ್ಧನ,ಇಂಗಳಗಿ ನಾರಾಯಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.ರಾಜ್ಯ ರೇಲ್ವೆ ಕ್ರೀಯಾ ಸಮಿತಿಯ ಅಧ್ಯಕ್ಷ ಮಹೇಶ್ವರ ಸ್ವಾಮಿ ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *