
ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿನ ರೋಡ ಹಂಪ್ಸ್ ತೆರುವು ಗೊಳಿಸಿ.
ಗಂಗಾವತಿ: ರಾಜ್ಯದ ಎಲ್ಲಾ ರಸ್ತೆಗಳಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.ಕೆಟ್ಟು ಹೋದ ರಸ್ತೆಗಳಲ್ಲಿ ಈ ಹಂಪ್ಸಗಳ ಅವಶ್ಯಕತೆ ಇದೆಯಾ ? ಅಫ಼ಘಾತಗಳನ್ನು ತಡೆಯಲು ಎನ್ನುವುದಾದರೆ,ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಒಳ ರಸ್ತೆಯಲ್ಲಿ ರೋಡ ಹಂಪ್ಸ್ ನಿರ್ಮಿಸುವುದಾದರೆ ನಿರ್ಮಿಸಿ.ಆದರೆ ಹೈವೇಗಳಲ್ಲಿ ಅದೂ ಟೋಲ್ ರಸ್ತೆಯಲ್ಲಿ ರೋಡ ಹಂಪ್ಸ್ ನಿರ್ಮಿಸುವುದು ಎಷ್ಟು ಸರಿ ? ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಗಂಗಾವತಿ ನಗರದಿಂದ ಕೇವಲ 6 ಕಿ.ಮಿ. ಅಂತರದಲ್ಲಿರುವ ಹೇರೂರ ಗ್ರಾಮ ತಲುಪಲು ಸುಮಾರು 20 ರೋಡ ಹಂಪ್ಸ್ ಹಾಕಲಾಗಿದೆ.ಇದೇ ರಸ್ತೆಯಲ್ಲಿ ಬರುವ ಕೃಷಿ ವಿಶ್ವ ವಿಧ್ಯಾಲಯದ ಮುಂದೆ ದೊಡ್ಡದಾದ ರೋಡ ಹಂಪ್ಸ್ ಹಾಕಲಾಗಿದೆ.ಇದು ಬೇಕಿತ್ತೆ ? ಅಲ್ಲಿ ಚಿಕ್ಕ ಮಕ್ಕಳು ಏನಾದರೂ ಅಭ್ಯಾಸಮಾಡುತ್ತಾರೆಯೆ ? ಸುಳೇಕಲ್ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿಯಲ್ಲಿ ರೋಡ ಹಂಪ್ಸ್ ನಿರ್ಮಿಸಲಾಗಿದೆ.ಅದರ ಬದಲು,ಹೈವೇ ಸಂಪರ್ಕಿಸುವ ಒಳ ರಸ್ತೆಗೆ ಬೇಕಾದರೆ ರೋಡ ಹಂಪ್ಸ್ ಹಾಕಿ ಎಂದವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರದಲ್ಲಿ ಸೂಚಿಸಿದ್ದಾರೆ.
ಇನ್ನು ಕನಕಗಿರಿ ಪಟ್ಟಣಕ್ಕೆ ಪ್ರವೇಶ ಮಾಡುವ ಮುನ್ನ ದೂರದಲ್ಲಿ ಶಾಲೆಯೊಂದು ಕಾಣುತ್ತದೆ.ಮುಖ್ಯ ರಸ್ತೆಯಿಂದ ಅದು ಒಂದು ಕಿಲೋಮೀಟರ್ ನಷ್ಟು ದೂರವಿದ್ದರೂ ಅಲ್ಲಿ ರೋಡ ಹಂಪ್ಸ್ ಹಾಕಲಾಗಿದೆ ಎಂದವರು ಅಪಾದಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ಹಿಟ್ನಾಳ ಕ್ರಾಸ್ ನಲ್ಲಿ ಅತಿ ಎತ್ತರದ ರೋಡ ಹಂಪ್ಸ್ ಹಾಕಲಾಗಿದೆ. ಅವುಗಳನ್ನು ಕೂಡಲೇ ತೆರವುಗೊಳಿಸಿ, ಒಳ ರಸ್ತೆಯಲ್ಲಿ ರೋಡ ಹಂಪ್ಸ್ ನಿರ್ಮಿಸಿ ಹಾಗೂ ಕೊಪ್ಪಳ ಜಿಲ್ಲೆಯ ಗಿಣಿಗೇರಾ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯಲ್ಲಿ (ಸಂಖ್ಯೆ 23 ) ನೂತನವಾಗಿ ನಿರ್ಮಿಸಿರುವ ರೈಲ್ವೆಯ ಮೇಲ್ಸೇತುವೆ ಆರಂಭ ಮತ್ತು ಕೊನೆಯ ಭಾಗದಲ್ಲಿ ಭಾರಿ ಗಾತ್ರದ ರೋಡ ಹಂಪ್ಸ್ ನಿರ್ಮಿಸಲಾಗಿದೆ ಇದು ತಪ್ಪು ಎಂದವರು ಹೇಳಿದ್ದಾರೆ.
ಇಂತಹ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿ, ಕಾರುಗಳು ಸಂಚರಿಸಲು ಅನಾನುಕೂಲವಾಗಿದೆ. ಪ್ರೀಮಿಯಂ ಕಾರುಗಳಂತೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಈ ರೀತಿಯ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವುದರಿಂದ ವಾಹನಗಳು ರಿಪೇರಿಗೆ ಬರುತ್ತಿವೆ ಮತ್ತು ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಕುತ್ತಿಗೆ ಮತ್ತು ಸೊ೦ಟದ ನೋವುಗಳು ಬರುತ್ತಿವೆ.ಈ ಕೂಡಲೇ ಇಂತಹ ಅವೈಜ್ಞಾನಿಕ ರೋಡ ಹಂಪ್ಸ್ ಗಳನ್ನು ಕೂಡಲೇ ತೆರವು ಗೊಳಿಸುವ ಮೂಲಕ,ನಮಗೆ ನ್ಯಾಯಾಲಯದಲ್ಲಿ ದಾವೆ ಹೊಡುವುದನ್ನು ಮತ್ತು ಲೋಕಾಯುಕ್ತರಿಗೆ ದೂರು ನೀಡುವುದನ್ನು ತಪ್ಪಿಸಿ ಎಂದವರು ಎಚ್ಚರಿಕೆ ನೀಡಿದ್ದಾರೆ.