ರಾಜ್ಯೊತ್ಸವ ಪ್ರಶಸ್ತಿ:ಪತ್ರಕರ್ತ ಎ.ಜಿ.ಕಾರಟಗಿ ಅವರಿಗೆ ಸನ್ಮಾನ.

ಗಂಗಾವತಿ:ರಾಜ್ಯೊತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಎ.ಜಿ.ಕಾರಟಗಿ ಅವರನ್ನು ಅವಿಭಜಿತ ಗಂಗಾವತಿ ತಾಲೂಕು ವೀರಶೈವ ಮಹಾ ಸಭೆಯ ಪದಾಧಿಕಾರಿಗಳು ಗುರುವಾರ ಕಾರಟಗಿ ಪಟ್ಟಣದ ಅವರ ನಿವಾಸದಲ್ಲಿ ಸನ್ಮಾನಿಸಿದರು.

ತಾಲೂಕು ಮಹಾ ಸಭೆಯ ನಿಕಟ ಪೂರ್ವ ಅಧ್ಯಕ್ಷ ನ್ಯಾಯವಾದಿ ಅಶೋಕಸ್ವಾಮಿ ಹೇರೂರ,ಹಾಲಿ ಅಧ್ಯಕ್ಷ ಎಚ್.ಗಿರೇಗೌಡ ವಕೀಲರು,ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಸಭೆಯ ಹಿರಿಯ ಸದಸ್ಯ ಮನೋಹರಸ್ವಾಮಿ ಮುದೇನೂರ ಹಿರೇಮಠ, ಕಾರ್ಯದರ್ಶಿ,ನ್ಯಾಯವಾದಿ ಸಂಧ್ಯಾ ಹೇರೂರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಕರಬಸಪ್ಪ ಶೀಲವಂತರ ಬೂದಗುಂಪಾ,ಬಸವರಾಜ ಸ್ವಾಮಿ ಎಚ್.ಎಮ್. ಪಾಲ್ಗೊಂಡಿದ್ದರು.

ನ್ಯಾಯವಾದಿ ಶ್ರೀಮತಿ ಸರಸ್ವತಿ ಪಾಟೀಲ್, ಗವಿಸಿದ್ದಯ್ಯ ಹಿರೇಮಠ,ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಚ್.ಎಮ್.ಸಿದ್ರಾಮಸ್ವಾಮಿ,ಗಂಗಾವತಿ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *