ದೊಡ್ಡಪ್ಪ ದೇಸಾಯಿ,ಶಿವ ಶಂಕರ ಕಲ್ಮಠ ಅವರಿಗೆ ಸನ್ಮಾನ.
ಗಂಗಾವತಿ:ಗಂಗಾವತಿ ತಾಲೂಕ ಪಿಕಾರ್ಡ ಬ್ಯಾಂಕ್ ಹಾಗೂ ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ನಿಯಮಿತದ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸಹಕಾರ ರತ್ನ ಪದವಿಗೆ ಭಾಜನಾಗಿದ್ದಾರೆ.
ಗಂಗಾವತಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾವತಿ ಸರಕಾರಿ ಆಸ್ಪತ್ರೆಯ ಶಿವ ಶಂಕರ ಕಲ್ಮಠ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅವಿಭಜಿತ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾದ ವತಿಯಿಂದ ಗುರುವಾರ ಇವರಿರ್ವರನ್ನು ಸನ್ಮಾನಿಸಲಾಯಿತು.
ತಾಲೂಕು ವೀರಶೈವ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ನ್ಯಾಯವಾದಿ ಅಶೋಕಸ್ವಾಮಿ ಹೇರೂರ, ಹಾಲಿ ಅಧ್ಯಕ್ಷ ಎಚ್.ಗಿರೇಗೌಡ ವಕೀಲರು,ಉಪಾಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮತ್ತು ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಮುದೇನೂರ ಹಿರೇಮಠ,ಕಾರ್ಯದರ್ಶಿಗಳಾದ ನ್ಯಾಯವಾದಿ ಶ್ರೀಮತಿ ಸಂಧ್ಯಾ ಅಶೋಕಸ್ವಾಮಿ ಹೇರೂರ,ಅಭಿಷೇಕ ಡಿ.ಎಮ್.,ಕಾರ್ಯಕಾರಿ ಮಂಡಳಿ ಸದಸ್ಯರಾದ ಕರಿಬಸಪ್ಪ ಬೂದಗುಂಪಾ,ಬಸವರಾಜ ಸ್ವಾಮಿ ಎಚ್.ಎಮ್.ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಮಸ್ವಾಮಿ ಎಚ್.ಎಮ್.,ಗವಿಸಿದ್ದಯ್ಯ ಹಿರೇಮಠ,ಅರವಿಂದ ಸ್ವಾಮಿ ಬಿದನೂರು ಮಠ,ರಾಜಶೇಖರಯ್ಯ ಭಾನಾಪೂರ ಮತ್ತಿತರರು ಹಾಜರಿದ್ದರು.