ರಾಯಚೂರು: ದರೋಜಿ-ಗಂಗಾವತಿ-ಬಾಗಲಕೋಟ್ ನೂತನ ರೈಲ್ವೆ ಲೈನ್ ಮಾರ್ಗ ರಚನೆಗೆ ಅನುದಾನ ಒದಗಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರವಿವಾರ ರಾಯಚೂರು ನಗರದಲ್ಲಿ ಸಚಿವರನ್ನು ಭೇಟಿಯಾದ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕಾರ್ಯದರ್ಶಿ ಉದಯ ಕುಮಾರ ದರೋಜಿ ಈ ಬಗ್ಗೆ ಮನವಿ ಸಲ್ಲಿಸಿದರು.
ಈಗಾಗಲೇ ಈ ನೂತನ ರೇಲ್ವೆ ಲೈನ್ ಸರ್ವೇ ಕಾರ್ಯ ಮುಗಿದಿದ್ದು ,ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡುವ ಕಾರ್ಯ ಬಾಕಿ ಇದೆ ಎಂದು ಸಚಿವರಿಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮನವಿಯನ್ನು ಪರಿಶೀಲಿಸಿ,ಉತ್ತರ ಕಳುಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ್ರು,ಗಂಗಾವತಿ ನಗರ ಸಭೆಯ ಹಿರಿಯ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ರಾಯಚೂರು ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಶಿ,ಅಧ್ಯಕ್ಷ ಎಸ್.ಕಮಲ ಕಿಶೋರ್, ಕಾರ್ಯದರ್ಶಿ ವಾಯ್.ಜಂಬಣ್ಣ,ಸದಸ್ಯರಾದ ಉದಯ ಕಿಶೋರ್, ಮತ್ತಿತರರು ಹಾಜರಿದ್ದರು.