ರೇಲ್ವೆ ಇಲಾಖೆಗೆ ಬಜೆಟ್,ಅರೆ ಕಾಸಿನ ಮಜ್ಜಿಗೆ:ಅಶೋಕಸ್ವಾಮಿ ಹೇರೂರ.
ಕೊಪ್ಪಳ: ಕೇಂದ್ರ ಸರಕಾರದ ಬೃಹತ್ತಾದ ರೇಲ್ವೆ ಇಲಾಖೆಗೆ ಕೇವಲ 7500 ಕೋಟಿ ರೂಪಾಯಿಗಳ ಅನುದಾನ ಒದಗಿಸಿರುವುದು, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳದ ನಿರ್ದೇಶಕ ಅಶೋಕಸ್ವಾಮಿ ಹೇರೂರ ವ್ಯಾಖ್ಯಾನಿಸಿದ್ದಾರೆ.
ಈ ಹಿಂದೆ ರೇಲ್ವೆ ಇಲಾಖೆಯ ಬಜೆಟ್ ನ್ನು ಪ್ರತ್ಯೇಕವಾಗಿ ಮಂಡಿಸಲಾಗುತಿತ್ತು.ಇದರಿಂದ ರೇಲ್ವೆ ಕಾಮಗಾರಿ, ಹೊಸ ಯೋಜನೆಗಳಿಗೆ ಅನುದಾನ ಪಡೆಯಲು ಸರಳ ಸಾಧ್ಯವಾಗುತಿತ್ತು.ಈಗ ಹಾಗಿಲ್ಲ ,ಹೀಗಾಗಿ ರೇಲ್ವೆ ಇಲಾಖೆಗೆ ಅನ್ಯಾಯವಾಗುತ್ತಿದೆ ಎಂದವರು ಹೇಳಿದ್ದಾರೆ.
ಸಣ್ಣ ಮೊತ್ತದ ಈ ಅನುದಾನದಿಂದ ಹೊಸ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ.ಹಳೇ ಕಾಮಗಾರಿಗಳು ಕು೦ಠಿತ ಗೊಳ್ಳುತ್ತವೆ ಹೀಗಾದರೆ ಸಂಪರ್ಕ ವ್ಯವಸ್ಥೆಯಲ್ಲಿನ ಸಾಧನೆಗೆ ಅಡಚಣೆಯಾಗುತ್ತದೆ.ಇದರಿಂದ ಉಧ್ಯಮ ಮತ್ತು ವ್ಯಾಪಾರ ವೃದ್ಧಿಸಲು ಅಡಚಣೆಯಾಗುತ್ತದೆ ಹೇರೂರ ವಿವರಿಸಿದ್ದಾರೆ.
ಹೆಚ್ಚುವರಿ ಬಜೆಟ್ ನಲ್ಲಿ ರೇಲ್ವೆ ಇಲಾಖೆಗೆ ಇನ್ನಷ್ಟು ಅನುದಾನ ನೀಡಿ,ಹೊಸ ಮಾರ್ಗಗಳಿಗೆ ಅನುದಾನ ನೀಡುವಂತೆ ರೇಲ್ವೆ ಸಚಿವರಿಗೆ ಮತ್ತು ವಿತ್ತ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆದ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇಲ್ವೆ ಇಲಾಖೆಯ ಆದಾಯವನ್ನೇ ಆ ಇಲಾಖೆಗೆ ನೀಡಿದರೆ ಸಾಕು,ಅಭಿವೃದ್ಧಿಗೆ ಸಾಕಾಗುತ್ತದೆ ಎಂದಿದ್ದಾರೆ.