ಕೊಪ್ಪಳ: ಕೇಂದ್ರ ಸರಕಾರದ ಹಣಕಾಸು ಖಾತೆಯ ಸಚಿವೆ ನಿರ್ಮಲಾ ಸಿತಾರಾಮ ಮಂಡಿಸಿದ ಬಜೆಟ್ ಜನ ಸ್ನೇಹಿಯಾಗಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.
ಮಹಿಳೆ,ರೈತರು ಮತ್ತು ಯುವಕರನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ಪ್ರೊತ್ಸಾಹಿಸುವ ಕಾರ್ಯಕ್ರಮಗಳು ಬಜೆಟ್ ನಲ್ಲಿರುವುದು ಸ್ವಾಗತಾರ್ಹ. ಆದರೆ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು 3 ಲಕ್ಷದಿಂದ 5 ಲಕ್ಷದವರೆಗೂ ವಿಸ್ತರಿಸಬೇಕಾಗಿತ್ತು ಹಾಗೂ
ಕ್ಯಾನ್ಸರ್ ರೋಗಿಗಳಿಗೆ ಬೇಕಾದ ಔಷಧಗಳ ಬೆಲೆಯ ಜೊತೆಗೆ ರಕ್ತದ ಒತ್ತಡ ಮತ್ತು ಸಕ್ಕರೆ ಖಾಯಿಲೆಗಳಿಗೆ ಬಳಸುವ ಔಷಧಗಳ ಬೆಲೆಯನ್ನು ಕಡಿಮೆ ಮಾಡಬೇಕಿತ್ತು ಇದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತಿತ್ತು ಮತ್ತು ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕಾಗಿತ್ತು ಎಂದು ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರೂ ಆದ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕದ ರಾಜ್ಯ ಸರಕಾರದಿಂದ ಆಯ್ಕೆಯಾದ ರಾಜ್ಯ ಸಭಾ ಸದಸ್ಯರಾದ ನಿರ್ಮಲಾ ಸೀತಾರಾಮ ಅವರು ರಾಜ್ಯಕ್ಕೆ ವಿಷೇಶ ಅನುದಾನ ನೀಡಬೇಕಾಗಿತ್ತು. ಆದರೆ ಬಜೆಟ್ ನಲ್ಲಿ ಅಂತಹ ಯಾವುದೇ ವಿಶೇಷ ಅನುದಾನ ಕಂಡು ಬಂದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಿರುವುದು ಒಳ್ಳೆಯದು,ಆದರೆ ಈ ಹಣವನ್ನು ರಾಜ್ಯಗಳು ಸದುಪಯೋಗ ಪಡಿಸಿಕೊಳ್ಳಬೇಕು.ಚಿನ್ನ ,ಬೆಳ್ಳಿಯ ಬೆಲೆಗಳಲ್ಲಿ ಇಳಿತ ಮಾಡಿರುವುದು ಸರಿಯಾದ ಕೆಲಸ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ.ಅಡಿಯಲ್ಲಿ ತರಬೇಕಾಗಿತ್ತು ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಹೇರೂರ ತಿಳಿಸಿದ್ದಾರೆ.