ಗಂಗಾವತಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಘವೇಂದ್ರ ಹಿಟ್ಣಾಳ ಹೇಳಿದ್ದಾರೆ.ಅವರು ಶನಿವಾರ ನಗರದ ಔಷಧೀಯ ಭವನದಲ್ಲಿ ಔಷಧಗಳ ಕಾನೂನು ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ದರೋಜಿ-ಗಂಗಾವತಿ ಮತ್ತು ಗಂಗಾವತಿ-ಬಾಗಲಕೋಟ ಬ್ರಾಡಗೇಜ್ ರೈಲ್ವೆ ಮಾರ್ಗದ ರಚನೆ,ಬೂದಗುಂಪಾ ಕ್ರಾಸ್ ನಿಂದ ಬಳ್ಳಾರಿ ನಗರದವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶ್ರಮಿಸುವುದಾಗಿ ಹೇಳಿದರು.
ಸಿಂಧನೂರು ನಗರದಿಂದ ಹುಬ್ಬಳ್ಳಿಗೆ ಸಂಚರಿಸುವ ಎರಡು ರೇಲ್ವೆಗಳಲ್ಲಿ ಒಂದನ್ನು ಧಾರವಾಡದವರೆಗೂ ಇನ್ನೊಂದನ್ನು ಗೋವಾದವರೆಗೂ ಸಂಚರಿಸುವಂತೆ ಮತ್ತು ವಿಜಯಪುರ-ಸಿಂಧನೂರ ರೇಲ್ವೆಯನ್ನು ನೂತನವಾಗಿ ಆರಂಭಿಸಲು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಸಂಸದರಿಗೆ ಮನವಿ ಮಾಡಿದರು.
ಹಿಟ್ಣಾಳ ಗ್ರಾಮದ ಸಮೀಪ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಶೌಚಾಲಯ ದುರಸ್ತಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರೋಡ ಹಂಪ್ಸ್ ಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅನಿವಾರ್ಯತೆಯನ್ನು ಸಂಸದರಿಗೆ ಹೇರೂರ ಮನವರಿಕೆ ಮಾಡಿದರು.ಹೇರೂರ ಅವರ ಬಹುತೇಕ ಮನವಿಗಳ ಬಗ್ಗೆ ಸಂಸದರು ಸಕಾರಾತ್ಮಕವಾಗಿ ಪ್ರತಿಕ್ರೀಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿದ್ದ
ಸಮಾಜಿಕ ಹೋರಾಟಗಾರ್ತಿ ಶೈಲಜಾ ಹಿರೇಮಠ ಮಾತನಾಡಿ ಔಷಧ ವ್ಯಾಪಾರಿಗಳದ್ದು ವ್ಯಾಪಾರವಲ್ಲ, ಸೇವಾ ವೃತ್ತಿ.ಅದಕ್ಕಾಗಿ ವೃತ್ತಿಗೆ ಧಕ್ಕೆ ಆಗದಂತೆ ನಡೆದು ಕೊಳ್ಳಬೇಕೇಂದು ಕರೆ ನೀಡಿದರು.ಔಷಧ ವ್ಯಾಪಾರಿಗಳು ವ್ಯಾಪಾರಿ ಮನೋಭಾವನ್ನು ಇಟ್ಟು ಕೊಂಡರೆ ಹಣ ಮಾತ್ರ ಗಳಿಸಬಹುದು, ಸೇವಾ ಮನೋಭಾವ ಇಟ್ಟುಕೊಂಡರೆ ಹಣ ಮತ್ತು ಹೆಸರು ಎರಡನ್ನೂ ಗಳಿಸಬಹುದೆಂದು ಅವರು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಸಂಸದ ರಾಜಶೇಖರ ಹಿಟ್ಣಾಳ ಅವರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಅದಕ್ಕೆ ಪ್ರತಿಕ್ರೀಯಿಸಿದ ಹಿಟ್ಣಾಳ,ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉದ್ಯಮಿ ಮುಷ್ಟಿ ವಿರುಪಾಕ್ಷಪ್ಪ ,ನಗರಸಭಾ ಸದಸ್ಯರಾದ ಮನೋಹರ ಸ್ವಾಮಿ ಹಿರೇಮಠ, ವಾಸುದೇವ ನವಲಿ,ಮಾಜಿ ಅಧ್ಯಕ್ಷ ವೆಂಕಟೇಶ, ವಿಶ್ವನಾಥ ಕೆಸರಟ್ಟಿ, ಹನುಮರೆಡ್ಡೆಪ್ಪ ಮಾಲಿ ಪಾಟೀಲ್, ಅಶೋಕಸ್ವಾಮಿ ಹೇರೂರ, ವೀರಣ್ಣ ಕಾರಂಜಿ,ಸಂಧ್ಯಾ ಪಾರ್ವತಿ, ಶೈಲಜಾ ಹಿರೇಮಠ ಸನ್ಮಾನ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಔಷಧ ವ್ಯಾಪಾರದಲ್ಲಿ ನಿಯಮಗಳನ್ನು ಉಲ್ಲಂಘಿಸದೆ ವ್ಯವಹರಿಸಲು ಔಷಧ ವ್ಯಾಪಾರಿಗಳಿಗೆ ತಾಕೀತು ಮಾಡಿದರು.
ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಹಿರೇಮಠ ಕಾರ್ಯಕ್ರಮವನ್ನು ನಿರ್ವಹಿಸಿದರು.ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕರಾದ ಅಜಯ ಕುಮಾರ್, ರಮೇಶ್ ಬಾಬು, ಔಷಧ ವ್ಯಾಪಾರಿಗಳಾದ ಎಸ್.ಗಣೇಶ, ಎಸ್.ಮಂಜುನಾಥ, ಅರಳಿ ಅಮರೇಶ ಕಾರಟಗಿ, ಶರಣಪ್ಪ ಬೆಟಗೇರಿ, ನಾಗರಾಜ ಹನುಮನಾಳ, ಚಂದ್ರಶೇಖರಯ್ಯ ಹೇರೂರ ಸೇರಿದಂತೆ ನೂರಕ್ಕು ಹೆಚ್ಚು ಔಷಧ ವ್ಯಾಪಾರಿಗಳು ಭಾಗವಹಿಸಿದ್ದರು.
ರಾಜಶೇಖರಯ್ಯ ಭಾನಾಪೂರ, ಕಲ್ಯಾಣರಾವ್, ಸಿ.ಚಿದಾನಂದ ಹಾಗೂ ಇತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ದುರ್ಗಾಶ್ರೀ ಮೆಡಿಕಲ್ ಸ್ಟೊರ್ಸ್ ಮಾಲೀಕರಾದ ಮಲ್ಲಿಕಾರ್ಜುನ ಮತ್ತು ಯಶೋದಾ ದಂಪತಿಗಳ ಮಗಳಾದ ಕುಮಾರಿ ಸಂಗೀತಾ ಧಾರವಾಡ ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ ಬಿ.ಎಸ್.ಸಿ.(ಅಗ್ರಿ) ಪದವಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣವಾಗಿದ್ದು,ಅಖಿಲ ಭಾರತ ಮಟ್ಟದಲ್ಲಿ 28 ಸಾವಿರ ಅಭ್ಯರ್ಥಿಗಳ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ 102 ನೇ ಸ್ಥಾನ ಪಡೆದು ಕೇರಳದ ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ ಎಮ್.ಎಸ್.ಸಿ.ಅಗ್ರಿ ಅಭ್ಯಾಸಕ್ಕೆ ಪ್ರವೇಶ ಪಡೆದಿದ್ದಾಳೆ.ಈ ನಿಮಿತ್ಯ ಸಂಗೀತಾ ಪಾಲಕರನ್ನು ಸನ್ಮಾನಿಸಲಾಯಿತು.