ರಾಷ್ಟ್ರೀಯ ಹೆದ್ದಾರಿ: ರಸ್ತೆ ,ನಾಮ ಫ಼ಲಕಗಳ ದುರಸ್ತಿ.
ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೂದಗುಂಪಾ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ಹರಿದು ಹೋಗಿದ್ದ ನಾಮ ಫ಼ಲಕಗಳು ಮತ್ತು ರಸ್ತೆಗಳ ದುರಸ್ತಿ ಮಾಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದು ತಿಳಿಸಿದೆ.
ಈ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪ್ರಾಧಿಕಾರಕ್ಕೆ ಪತ್ರ ಬರೆದು ದೂರು ಸಲ್ಲಿಸಿದ್ದರು.
ಹರಿದು ಹೋದ ನಾಮ ಫ಼ಲಕಗಳನ್ನು ಬದಲಾಯಿಸಲಾಗಿದ್ದು, ಬೂದಗುಂಪಾ ಕ್ರಾಸ್ ನಿಂದ ಹೊಸಪೇಟೆ ಮತ್ತು ಕುಷ್ಟಗಿ ಸಂಪರ್ಕ ರಸ್ತೆಗಳನ್ನು ದುರಸ್ತಿಗೊಳಿಸಲಾಗಿದೆ.
ಹಿಟ್ನಾಳ ಕ್ರಾಸ್ ಹತ್ತಿರ ರಸ್ತೆ ಉಬ್ಬುಗಳ ಎತ್ತರ ಕಡಿಮೆ ಮಾಡಲಾಗಿದೆ. ಇತರ ಕಡೆ ರಸ್ತೆ ಉಬ್ಬುಗಳನ್ನು ತೆರವು ಗೊಳಿಸಲು ಸ್ಥಳೀಯ ಜನರು ಅಡೆ ತಡೆ ಉಂಟು ಮಾಡುತ್ತಿದ್ದಾರೆಂದು ಪತ್ರದಲ್ಲಿ ಮಾಹಿತಿ ನೀಡಲಾಗಿದೆ.
ಈ ರಸ್ತೆಯಲ್ಲಿ ಬರುವ ಶೌಚಾಲಯಗಳ ದುರಸ್ತಿಗೆ ಟೆ೦ಡರ್ ಕರೆಯಲಾಗಿದ್ದು , ಕೂಡಲೆ ದುರಸ್ತಿಗೊಳಿಸಲಾಗುವುದು ಎಂದು ಟೋಲ್ ಗುತ್ತಿಗೆದಾರ ಸಂಸ್ಥೆ ಎಲ್.ಎನ್.ಮಾಳವಿಯಾ ಇನ್ಫರಾ ಪ್ರೊಜೆಕ್ಟ್ ಪ್ರವೇಟ್ ಲಿಮಿಟೆಡ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಉತ್ತರಿಸಿದ್ದು,ಆ ಪತ್ರದ ಪ್ರತಿಯನ್ನು ಸಹ ಲಗತ್ತಿಸಿ,ಅಧಿಕಾರಿಗಳು ಉತ್ತರಿಸಿದ್ದಾರೆ.