ಮಕ್ಕಳ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಡಾ.ಅಭಿಶೇಕಸ್ವಾಮಿ ಹೇರೂರ ಆಯ್ಕೆ.
ಗಂಗಾವತಿ:ಮೈಸೂರು ರಾಜ್ಯವೆಂದು ಕರೆಯಲಾಗುತ್ತಿದ್ದ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳಾಗಿದ್ದರಿಂದ ಸರ್ಕಾರ, ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿ, ವರ್ಷದಾದ್ಯಂತ ಕನ್ನಡ ನಾಡು,ನುಡಿಯ ಹಿರಿಮೆಯನ್ನು ತೋರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದೆ.
ಈ ಕಾರ್ಯಕ್ರಮಗಳನ್ನು “ಕರ್ನಾಟಕ ಸಂಭ್ರಮ-೫೦” ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ನಗರದ ‘ಲಿಟಲ್ ಹಾರ್ಟ್ಸ್’ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 30-11-2023 ರಂದು ಮಕ್ಕಳ 2 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಮಕ್ಕಳ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಾಲೆಯ ಹಳೆಯ ವಿದ್ಯಾರ್ಥಿ, ಎಂ.ಬಿ.ಬಿ.ಎಸ್.ವೈದ್ಯಕೀಯ ಪದವಿ ಪಡೆದು,ಪ್ರಸ್ತುತ ಎಂ.ಡಿ.(ಜನರಲ್ ಮೆಡಿಸಿನ್) ಅಭ್ಯಾಸ ಮಾಡುತ್ತಿರುವ ಅಭಿಶೇಕಸ್ವಾಮಿ ಹೇರೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಆ ದಿನ ಶಾಲಾ ಮಕ್ಕಳ ವಿವಿಧ ವಾದ್ಯ,ನೃತ್ಯ,ಕುಂಭ ಹಾಗೂ ಹಲವಾರು ಸ್ತಬ್ಧ ಚಿತ್ರಗಳೊಂದಿಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಹಾಗೂ ಮಕ್ಕಳಿಂದ ಘೋಷ್ಟಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಂತರ ದಿನಾಂಕ 02-12-2023 ರ ಶನಿವಾರದಂದು ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.