ರಾಜ್ಯ ವಾಣಿಜ್ಯೊಧ್ಯಮ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅಶೋಕಸ್ವಾಮಿ ಹೇರೂರ ಸ್ಪರ್ದೆ.
ಬೆಂಗಳೂರು:ಫ಼ೇಡರೇಶನ್ ಅಫ಼್ ಚೇಂಬರ್ ಆಫ್ ಕಾಮರ್ಸ ಮತ್ತು ಇಂಡಸ್ಟ್ರಿ ಈ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಸದಸ್ಯತ್ವ ಸ್ಥಾನಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಾಮ ಪತ್ರ ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಸರ್ವೋತ್ತಮ ಜೋಶಿ, ಯಾದಗಿರಿ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಚನ್ನ ಮಲ್ಲಿಕಾರ್ಜುನ ಅಕ್ಕಿ ಇವರುಗಳು ಕ್ರಮವಾಗಿ ಸೂಚಕರಾಗಿ, ಅನುಮೋದಕರಾಗಿ ಅಶೋಕಸ್ವಾಮಿ ಹೇರೂರ ಅವರ ನಾಮ ಪತ್ರಕ್ಕೆ ಸಹಿ ಹಾಕಿದ್ದಾರೆ.
ಸೂಚಕರಲ್ಲಿ ಒಬ್ಬರಾದ ಚನ್ನ ಮಲ್ಲಿಕಾರ್ಜುನ ಅಕ್ಕಿ ನಾಮ ಪತ್ರ ಸಲ್ಲಿಸಿಲ್ಲ.ಇನ್ನೊರ್ವರಲ್ಲಿ ಒಬ್ಬರಾದ ತ್ರಿವಿಕ್ರಮ ಜೋಶಿ ನಾಮ ಪತ್ರ ಸಲ್ಲಿಸಿದ್ದಾರೆ.ಆದರೆ ಅವರು ನಾಮ ಪತ್ರ ಹಿಂತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರಿಂದ,ತಾವು ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವನ್ನು ಅಶೋಕಸ್ವಾಮಿ ಹೇರೂರ ವ್ಯಕ್ತಪಡಿಸಿದ್ದಾರೆ.
ಕಳೆದ 23 ವರ್ಷಗಳಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಹಾಗೂ ಇತರ ಜಿಲ್ಲೆಯ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದಿರುವ ಅಶೋಕಸ್ವಾಮಿ ಹೇರೂರ ಅವರನ್ನು ಬೆಂಬಲಿಸಲು ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ನಿರ್ಧರಿಸಿದ್ದಾರೆ.
ಹೀಗಾಗಿ ಬಹುತೇಕ ಅಶೋಕಸ್ವಾಮಿ ಹೇರೂರ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ನಾಮ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಚನ್ನ ಮಲ್ಲಿಕಾರ್ಜುನ ಅಕ್ಕಿ,ತ್ರಿವಿಕ್ರಮ ಜೋಶಿ ಹಾಗೂ ಉದಯಕುಮಾರ ದರೋಜಿ ಉಪಸ್ಥಿತರಿದ್ದರು.
ತಮ್ಮ ಆಯ್ಕೆಯಿಂದ ರೇಲ್ವೆ , ಕೇಂದ್ರ ,ರಾಜ್ಯ ಹೆದ್ದಾರಿ ಹಾಗೂ ಮತ್ತಿತರ ಕಾರ್ಯಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಸಹಾಯವಾಗುತ್ತದೆ ಎಂದು ಹೇರೂರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.