ಸಾರ್ವಜನಿಕ ಕಾರ್ಯಕ್ಕೆ ಸದಾ ಸಮ್ಮತಿ:ಸಚಿವ ಶಿವರಾಜ ತಂಗಡಗಿ.
ಗಂಗಾವತಿ:ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಮತ್ತು ಹೋರಾಟಗಾರರಾದ ಅಶೋಕಸ್ವಾಮಿ ಹೇರೂರ ಅವರ ಸಾರ್ವಜನಿಕ ಕಾರ್ಯಕ್ಕೆ ಸದಾ ತಮ್ಮ ಸಮ್ಮತಿ ಇರುತ್ತದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಔಷಧ ವ್ಯಾಪಾರಿಗಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ.ಇಂತಹ ಹಲವು ಜನ ಹಿತ ಕಾರ್ಯಕ್ರಮಗಳು ಅಶೋಕಸ್ವಾಮಿ ಹೇರೂರ ಅವರಿಂದ ನಡೆಯಲಿ,ಅವರ ಸಲಹೆ-ಸಹಕಾರಕ್ಕೆ ನಮ್ಮ ಸ್ವಾಗತವಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬಸಯ್ಯ ಸಸಿಮಠ ಹೇರೂರ,ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ,ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಮರೇಶ್ ಗೋನಾಳ, ಕಾಂಗ್ರೆಸ್ ಧುರಿಣೆ,ಶೈಲಜಾ ಹಿರೇಮಠ,ನ್ಯಾಯವಾದಿ ಸಂಧ್ಯಾ ಹೇರೂರ,ಕಾರಟಗಿ-ಕನಕಗಿರಿ ಮತ್ತು ಗಂಗಾವತಿ ಸಂಯುಕ್ತ ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ್ ಮುಂತಾದವರು ಹಾಜರಿದ್ದರು.